ಮುಂಬೈನ ಛತ್ರಪತಿ ಶಿವಾಜಿ ಏರ್ ಪೋರ್ಟ್ ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡದ್ದು ಈ ಅವತಾರದಲ್ಲಿ

ಕನ್ನಡ ಚಿತ್ರರಂಗಕ್ಕೆ ಸಾನ್ವಿ ಆಗಿ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿ ಬೇಡಿಕೆಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲಿ ಸಹ ರಶ್ಮಿಕಾಗೆ ಬಹಳ ಬೇಡಿಕೆ ಇದೆ. ಸಿನಿಮಾಗಳಿಗಿಂತ ಹೆಚ್ಜಾಗಿ ತಾವು ನೀಡುವ ಹೇಳಿಕೆಗಳಿಂದ, ನಡೆದುಕೊಳ್ಳುವ ರೀತಿಯಿಂದಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ ರಶ್ಮಿಕಾ. ಕಿರಿಕ್ ಪಾರ್ಟಿ ಸಿನಿಮಾ ಇಂದ ನಟ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿಯಲ್ಲಿದ್ದ ನಟಿ ರಶ್ಮಿಕಾ, ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಕೆಲ ದಿನಗಳ ನಂತರ ಮುರಿದುಕೊಂಡರು.

 

 

ದಕ್ಷಿಣ ಭಾರತದ ಪ್ರಖ್ಯಾತ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪನ್ನಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮಾಧ್ಯಮಗಳು ಮತ್ತು ಅಭಿಮಾನಿಗಳ ಹಾರ್ಟ್ ತ್ರೋಬ್ ಆಗಿರುವ ರಶ್ಮಿಕಾ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಮುಂಬೈನ ಏರ್‌ಪೋರ್ಟ್‌ನಲ್ಲಿ ನಟಿಯ ಫೋಟೋ ಕ್ಲಿಕ್ಕಿಸಲಾಗಿದೆ ಮತ್ತು ನಟಿ ಫೋಟೋಗೆ ಫೋಸ್ ನೀಡಿ ನಕ್ಕು ಅಭಿಮಾನಿಗಳಿಗೆ ಹಾರ್ಟ್ ಸಂಕೇತ ತೋರಿಸಿದ್ದಾರೆ.

 

 

ರಶ್ಮಿಕಾ ರೆಡ್ ಶಾರ್ಟ್ ಸ್ಲೀವ್ ಲೆಸ್ ಟಾಪ್ ನಲ್ಲಿ ಕಾಣಿಸಿಕೊಂಡಿದ್ದು, ಸುಂದರವಾದ ಬ್ಲೂ ಜೀನ್ಸ್ ಧರಿಸಿದ್ದರು. ತುಂಬಾ ಲವಲವಿಕೆಯ ಮತ್ತು ಹಸನ್ಮುಖಿಯ ರಶ್ಮಿಕಾ ಈ ದಿನಗಳಲ್ಲಿ ಹೆಚ್ಚಾಗಿ ನಗರ ಮತ್ತು ಹೊರಗೆ ಚೆಕ್ ಔಟ್ ಮಾಡುತ್ತಿದ್ದಾರೆ ಏಕೆಂದರೆ ಅವಳು ಎರಡು ಮನರಂಜನೆಯ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ – ದಕ್ಷಿಣ ಭಾರತ ಚಿತ್ರರಂಗ ಮತ್ತು ಹಿಂದಿ ಚಲನಚಿತ್ರರಂಗ. ಈಗಾಗಲೇ ನಟಿ ಎರಡು ಚಿತ್ರರಂಗದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಾವು ಹೇಳಲೇಬೇಕು.

 

 

ರಶ್ಮಿಕಾ ಅವರ ಮೊದಲ ಹಿಂದಿ ಚಿತ್ರ ತೆರೆಗೆ ಬರುವ ಮೊದಲೇ, ತಮ್ಮ ಎರಡನೆಯ ಅವಕಾಶ ಪಡೆದುಕೊಂಡಿದ್ದಾರೆ. ಆಕೆಯ ಮೊದಲ ಚಿತ್ರ ‘ಮಿಷನ್ ಮಜ್ನು’ವಿನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಂಡರೆ ಎರಡನೆಯದು ಬಾಲಿವುಡ್ ನ ಮೇರು‌ನಟ ಅಮಿತಾಬ್ ಬಚ್ಚನ್ ಜೊತೆ ‘ಗುಡ್ ಬೈ’ ನಲ್ಲಿ ವಿಕಾಸ್ ಬಹ್ಲ್ ಅವರ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ , ಜೂನಿಯರ್ ಎನ್ ಟಿ ಆರ್ ಅಭಿನಯದ ‘ ಚೌಡಪ್ಪ ನಾಯ್ಡು’ ಚಿತ್ರದಲ್ಲೂ ರಶ್ಮಿಕಾ ನಟಿಸಲಿದ್ದಾರೆ.

 

https://youtu.be/AzJ3dHpkxek

Be the first to comment

Leave a Reply

Your email address will not be published.


*