ಮನುಷ್ಯನ ರೂಪದಲ್ಲಿ ಕಾಣಿಸಿಕೊಂಡ ಶಿರಡಿ ಸಾಯಿಬಾಬಾ, ಎಲ್ಲಿ, ಹೇಗೆ ಕಾಣಿಸಿಕೊಂಡರು ಶಿರಡಿ ಸಾಯಿ ಬಾಬಾ?

ಜಗತ್ತಿನಲ್ಲಿ ಸಾಕಷ್ಟು ಜನರು ದೇವರು ಇದ್ದಾನೆ ಎಂಬುದನ್ನು ನಂಬದೇ ಇರಬಹುದು. ಆ ಬಗ್ಗೆ ಸಾಕಷ್ಟು ವಾದ ಸರಣಿಗಳನ್ನು ಅವರು ನಮ್ಮ ಮುಂದ ಇಡಬಹುದು. ಆದರೆ ದೇವರು ಇಲ್ಲ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಏಕೆಂದರೆ ವ್ಯಕ್ತಿಯ ನಂಬಿಕೆಗೆ ತಕ್ಕಂತೆ ದೇವರು ನಮ್ಮ ಮುಂದೆ ಕಾಣಿಸಿಕೊಳ್ಳುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ.

 

 

ಕೆಲವರಿಗೆ ದೇವರು ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಅದು ವ್ಯಕ್ತಿಯೇ ಆಗಿರಲಿ ಅಥವಾ ವಸ್ತುಗಳೇ ಆಗಿರಬಹುದು. ದೇವರ ಇರುವಿಕೆಯನ್ನು ಅನುಭವಿಸಬೇಕೇ ಹೊರತು ಅದನ್ನು ಸ್ಪರ್ಶ ಮಾಡಲು ಸಾಧ್ಯವಾಗದೇ ಇರಬಹುದು. ಹಾಗೆಂದ ಮಾತ್ರಕ್ಕೆ ದೇವರೇ ಇಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ.

 

 

ನಾವು ಉಸಿರಾಟ ಮಾಡುವ ಗಾಳಿ ನಮಗೆ ಕಾಣಿಸದೇ ಇರಬಹುದು ಆದರೆ ಅದು ನಮ್ಮ ಅನುಭವಕ್ಕೆ ಬರುತ್ತದೆ. ಹಾಗೆಯೇ ದೇವರು ಕೂಡ ನಮ್ಮ ನಡುವೆ ಇದ್ದಾನೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಜೊತೆಗೆ ಲಭ್ಯವಿದೆ. ಈಗ ಹೇಳಲು ಹೊರಟಿರುವ ಘಟನೆ ಆಂಧ್ರಪ್ರದೇಶದ ಶ್ರೀಶೈಲಂ ಬಳಿ ಇರುವ ಪಡಚಾಮ ಎಂಬ ಗ್ರಾಮದಲ್ಲಿ ನಡೆದದ್ದು. ಈ ಊರು ಶ್ರೀಶೈಲದಿಂದ ಸುಮಾರು ೨೫ ಕಿಮೀ ದೂರದಲ್ಲಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ತಮ್ಮ ಮನೆಯ ಟೆರೆಸ್‌ ಮೇಲೆ ಏನೋ ಕೆಲಸ ಮಾಡುತ್ತಿರುವಾಗ ಗುಡುಗು ಮಿಂಚು ಕಾಣಿಸಿಕೊಳ್ಳುತ್ತದೆ.

 

 

ಆಗ ಆ ವ್ಯಕ್ತಿ ತಮ್ಮ ಮೊಬೈಲ್‌ ನಲ್ಲಿ ಆ ಕ್ಷಣಗಳನ್ನು ಸೆರೆ ಹಿಡಿಯಲು ಮುಂದಾಗುತ್ತಾನೆ. ಸೆರೆ ಹಿಡಿಯುತ್ತಿರುವಾಗ ಆ ವ್ಯಕ್ತಿಗೆ ಮೋಡದ ಮಧ್ಯೆ ಏನೂ ಒಂಥರಾ ವಿಚಿತ್ರ ನಡೆಯುತ್ತಿರುವುದು ಕಾಣಿಸುತ್ತದೆ. ಮೋಡದ ನಡುವೆ ಯಾರೋ ನಡೆದು ಹೋಗುವುದು ಕಾಣಿಸುತ್ತದೆ. ನಂತರ ಪದೆ ಪದೇ ನೋಡಿದಾಗ ಕುದ್ದು ಶಿವನೇ ನಡೆದುಕೊಂಡು ಹೋಗುತ್ತಿರುವುದು ಗೋಚರವಾಗುತ್ತದೆ.

 

 

ಶ್ರೀಶೈಲದಲ್ಲಿ ಸಾಕ್ಷಾತ್‌ ಶಿವನೇ ವಾಸ ಮಾಡುತ್ತಿದ್ದು, ೧೨ ಜ್ಯೋತಿರ್ಲಿಂಗಗಳ ಪೈಕಿ ಇದು ೨ನೇ ಜ್ಯೋತಿರ್ಲಿಂಗವಾಗಿದೆ. ಇಲ್ಲಿಗೆ ಪ್ರತಿ ಸೋಮವಾರ ಆ ಪರಶಿವನು ಧರೆಗೆ ಇಳಿದು ಬರುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಆ ಪರಶಿವನೇ ಆ ಮೋಡದ ಮಧ್ಯೆ ಕಾಣಿಸಿಕೊಂಡಿರುವುದಾಗಿ ಇಲ್ಲಿನ ಜನರು ನಂಬುತ್ತಾರೆ. ಮಹಾರಾಷ್ಟ್ರದ ಪುಣೆ ಬಳಿ ಇರುವ ಪಾತಾಳೇಶ್ವರ ಸರ್ಕಲ್‌ ಬಳಿ ಶಿವನ ವಿಗ್ರಹವನ್ನು ಸ್ಥಾಪನೆ ಮಾಡಲಾಗಿದೆ. ಈ ವೃತ್ತದಲ್ಲಿ ತೆರಳುವಾಗ ಜನಸಾಮಾನ್ಯರು ತಮ್ಮ ವಾಹನವನ್ನು ನಿಲ್ಲಿಸಿ ದೇವರಿಗೆ ವಂದಿಸಿ ಮುಂದೆ ಸಾಗುತ್ತಾರೆ.

 

 

ಒಂದು ದಿನ ಇದ್ದಕ್ಕಿದ್ದ ಹಾಗೆ ತ್ರಿಶೂಲ ತನ್ನಷ್ಟಕ್ಕೆ ಮಾಯವಾಗಿ ಬಿಡುತ್ತದೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತ್ರಿಶೂಲ ಮಾಯವಾದರೂ ಯಾರಿಗೂ ಇದರ ಬಗ್ಗೆ ಅರಿವಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಇದೇ ವೃತ್ತದಲ್ಲಿ ಅಪಘಾತವೊಂದು ಸಂಭವಿಸಿದ್ದರಿಂದ ಸಿಸಿ ಕ್ಯಾಮೆರಾದ ಫೂಟೇಜ್‌ ನೋಡಿದಾಗ ಈ ಸತ್ಯ ಬಯಲಾಗಿದೆ. ಆದರೆ ಸುತ್ತಮುತ್ತಾ ಎಲ್ಲೂ ತ್ರಿಶೂಲ ಕಾಣಿಸದೇ ಇರುವುದು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

 

 

ಮತ್ತೊಂದು ಘಟನೆ ಉತ್ತರಪ್ರದೇಶ ರಾಜ್ಯದ ಇಂದೋರ್‌ ನಲ್ಲಿರುವ ಚಿಕ್ಕ ಸಾಯಿ ಬಾಬಾ ದೇವಸ್ಥಾನದಲ್ಲಿ ಅದ್ಭುತವಾದ ಪವಾಡವೊಂದು ನಡೆದಿದೆ. ಈ ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದ್ದಕ್ಕಿದ್ದ ಹಾಗೆ ಈ ದೇವಸ್ಥಾನಕ್ಕೆ ಸಾಯಿ ಬಾಬಾನ ಹಾಗೆ ಕಾಣುವ ವ್ಯಕ್ತಿ ದೇವಸ್ಥಾನವನ್ನು ಪ್ರವೇಶ ಮಾಡುತ್ತಾನೆ. ಅಲ್ಲದೇ, ಆ ದೇವಸ್ಥಾನದ ಅರ್ಚಕರ ಬಳಿ ಬಂದು ಬಾಬಾ ದರ್ಶನ ಮಾಡಿ, ಪ್ರಸಾದ ಬೇಕೆಂದು ಮನವಿ ಮಾಡುತ್ತಾನೆ. ಯಾವುದೋ ಬಾಬಾನ ಭಕ್ತ ಇರಬೇಕೆಂದು ಯೋಚಿಸಿ ಬಾಬಾ ಮೂರ್ತಿಗೆ ಪೂಜೆ ಮಾಡಿ, ಪ್ರಸಾದವನ್ನು ಆ ವ್ಯಕ್ತಿಗೆ ನೀಡುತ್ತಾರೆ.

 

 

ಪ್ರಸಾದ ಸ್ವೀಕರಿಸಿದ ನಂತರ ಆ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಅಲ್ಲಿಂದ ಮಾಯವಾಗಿ ಬಿಡುತ್ತಾನೆ. ಈ ದೇವಸ್ಥಾನದಲ್ಲಿರುವ ಯಾವುದೇ ಸಿಸಿ ಕ್ಯಾಮೆರಾದಲ್ಲಿ ಆ ವ್ಯಕ್ತಿ ದೇವಸ್ಥಾನದಿಂದ ಹೊರಹೋಗಿರುವುದು ಕಾಣಿಸಿಲ್ಲ. ಈ ವಿಷಯ ತಿಳಿದು ಅರ್ಚಕರು ದಿಗ್ಭ್ರಾಂತರಾಗಿದ್ದಾರೆ. ಆ ವ್ಯಕ್ತಿ ಯಾರು? ಅವನು ಬಂದಿದ್ದಾರೂ ಎಲ್ಲಿಂದ? ಹೋದದ್ದು ಎಲ್ಲಿಗೆ ಎಂಬುದು ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದಾರೆ.

 

https://youtu.be/zaTSDkupgjI

Be the first to comment

Leave a Reply

Your email address will not be published.


*