ಪೋಲಿಸರ ಮೊರೆ ಹೋದ ಪಾರು ಧಾರವಾಹಿ ನಟಿ ಕಾರಣವೇನು ಗೊತ್ತಾ ?

ಕಿರುತೆರೆಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ 5 ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಕೂಡ ಒಂದು. ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಧಾರಿಯಾಗಿ ನಟಿಸುತ್ತಿರುವ ಈ ನಟಿಯ ನಿಜವಾದ ಹೆಸರು ಮಾನಸಿ ಜೋಶಿ. ಈಕೆ ನಿಜ ಜೀವನದಲ್ಲಿ ಸೌಮ್ಯ ಸ್ವಭಾವದ ಹುಡುಗಿ. ಮೂಲತಃ ಬೆಂಗಳೂರಿನವರಾಗಿದ್ದ ಮಾನಸಿ ಬಾಲ್ಯದಿಂದಲೂ ಸಂಗೀತವನ್ನು ಕೇಳಿದೊಡನೆ ಡ್ಯಾನ್ಸ್ ಮಾಡುತ್ತಿದ್ದರು .

 

 

ಇವರು ಭರತನಾಟ್ಯ ಕಲಾವಿದೆಯಾಗಿದ್ದು ಅನೇಕ ಕಾರ್ಯಕ್ರಮಗಳನ್ನು ಕೂಡ ನೀಡಿದ್ದಾರೆ. ಅವರು ಬಿಳಿ ಹೆಂಡ್ತಿ ಎಂಬ ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಈ ಧಾರಾವಾಹಿಯಲ್ಲಿ ರಮ್ಯಾ ಎಂಬ ಹೆಸರಿನಲ್ಲಿ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆ ನಂತರ ರಾಧಾ ರಮಣ ಧಾರಾವಾಹಿಯಲ್ಲಿ ರಮಣನ ತಂಗಿ ಪಾತ್ರದಲ್ಲಿ ಅನ್ವಿತಾ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದ್ದರು.

 

 

ಈಗ ಪಾರು ಧಾರಾವಾಹಿಯಲ್ಲಿ ಅನುಷ್ಕಾ ಎಂಬ ಹೆಸರಿನ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇವರು ತಮ್ಮ ಪಾತ್ರದ ಮೂಲಕವೇ ಮನೆ ಮಾತಾಗಿರುವ ಇವರಿಗೆ ಜನರಿಂದ ಉತ್ತಮವಾದ ರೆಸ್ಪಾನ್ಸ್ ಗಳು ಬರುತ್ತಿವೆ. ಇವರಿಗೆ ಕನ್ನಡ ಮಾತ್ರವಲ್ಲದೆ ಪರಭಾಷೆಗಳಿಂದಲೂ ಕೂಡ ಹಲವಾರು ಆಫರ್ ಗಳು ಬರುತ್ತಿವೆಯಂತೆ . ರಕ್ಷಿತ್ ಶೆಟ್ಟಿ, ಯಶ್, ಗಣೇಶ್, ಅವರೊಡನೆ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುವ ಆಸೆ ಅವರಿಗಿದೆಯಂತೆ. ನಾನು ಕಲಿತ ವಿದ್ಯೆಯನ್ನು ಇತರರಿಗೂ ಕಲಿಸಬೇಕೆಂಬ ಹಂಬಲ ಇವರದು. ಹಾಗಾಗಿ ಡ್ಯಾನ್ಸ್ ಕಲಿಯಬೇಕೆಂಬ ಆಸಕ್ತಿ ಇರುವ ಬಡ ಮಕ್ಕಳಿಗಾಗಿ ಡ್ಯಾನ್ಸ್ ಶಾಲೆಯನ್ನು ತೆರೆಯಬೇಕು ಎಂಬುದು ಇವರ ಕನಸು.

 

 

ಇದೀಗ ನಟಿ ಮಾನಸಿ ಸಮಸ್ಯೆಯೊಂದಕ್ಕೆ ಸಿಲುಕಿ ಅದನ್ನು ಪರಿಹರಿಸಿಕೊಳ್ಳುವ ಸಲುವಾಗಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ನಾನು ಇನ್ಸ್ಟಾಗ್ರಾಂನಲ್ಲಿ ಆಗಲಿ, ಫ್ಯಾನ್ಸ್ ಪೇಜ್ ಗಳಲ್ಲಾಗಲಿ, ನಾನು ನನ್ನ ಫೋನ್ ನಂಬರ್ ಅನ್ನು ನೀಡಿಲ್ಲ . ಪೇಜ್ ನ ವ್ಯಕ್ತಿಯೊಬ್ಬ ಪಾಸ್ವರ್ಡ್ ಮತ್ತು ಯೂಸರ್ ನೇಮ್ ಅನ್ನು ನೀಡಬೇಕೆಂದು ಬೆದರಿಸುತ್ತಿದ್ದಾನೆ. ಮೊದಲು ನಾನು ಅದನ್ನು ತಿರಸ್ಕರಿಸಿ ಸುಮ್ಮನಾದೆ ಆ ನಂತರ ಅವನು ಹೊಸ ಪೇಜ್ ಒಂದನ್ನು ಮಾಡಿ ತೊಂದರೆ ನೀಡುತ್ತಿದ್ದಾನೆ. ನನ್ನ ಹೆಸರಿನ ಪೇಜ್ ನಿಂದ ಕೆಟ್ಟದಾದ ಮೆಸೇಜ್ ಬಂದರೆ ದಯವಿಟ್ಟು ನನಗೆ ರಿಪೋರ್ಟ್ ಮಾಡಿ.

 

 

View this post on Instagram

 

A post shared by Mansi Joshi (@mansi._.joshi)

 

ನಾನು ಈ ವಿಚಾರವಾಗಿ ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ . ಬಹುಬೇಗ ಕಿಡಿಗೇಡಿಗಳು ಸಿಕ್ಕಿ ಬೀಳುತ್ತಾರೆ ಎಂಬ ಭರವಸೆ ನನಗಿದೆ. ಅನವಶ್ಯಕವಾಗಿ ಸೈಬರ್ ಕ್ರೈಮ್ ಅನ್ನು ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಟ ನಟಿಯರಿಗೆ ಹೇಗೆ ಅಭಿಮಾನಿಗಳು ಇರುತ್ತಾರೊ ಹಾಗೆಯೇ ಅವರನ್ನು ಕೆಟ್ಟ ರೀತಿಯಲ್ಲಿ ನಡೆಸಿ ಕೊಳ್ಳುವಂತಹ ಕಿಡಿಗೇಡಿಗಳು ಕೂಡ ಇರುತ್ತಾರೆ. ಅದಕ್ಕೆ ಒಂದು ಉದಾಹರಣೆ ಎಂದರೆ ಈ ಅನುಷ್ಕಾ ಪ್ರಕರಣ. ಅನುಷ್ಕಾ ಅವರ ಈ ಸಮಸ್ಯೆ ದೂರವಾಗಲಿ ಎಂದು ನಾವು ಹಾರೈಸೋಣ.

Be the first to comment

Leave a Reply

Your email address will not be published.


*