ಯಾರೇ ನೀ ಚೆಲುವೆ ಸಿನಿಮಾದ ನಟಿ ಸಂಗೀತ ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

ಕನ್ನಡ ಚಿತ್ರರಂಗ ಸೇರಿದಂತೆ ನಾನಾ ದಕ್ಷಿಣ ಭಾರತದ ನಾನಾ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈಲೆಂಟ್‌ ಆಗಿ ಕಣ್ಮರೆಯಾದ ನಟಿಯರು ಅದೆಷ್ಟೋ ಜನರಿದ್ದಾರೆ. ಆದರೆ ಅವರು ಕ್ರಿಯೆಟ್ ಮಾಡಿರುವ ಇಂಪ್ಯಾಕ್ಟ್ ಕನ್ನಡಿಗರ ಮನದಲ್ಲಿ ಇಂದಿಗೂ ಅಚ್ಚಳಿಯದೇ ಹಾಗೆಯೇ ಉಳಿದು ಬಿಟ್ಟಿದೆ. ಅದು ಅವರ ನಟನೆಗೆ ಇದ್ದಂತಹ ಶಕ್ತಿ. ನಮ್ಮ ಕನ್ನಡಿಗರು ಹೆಚ್ಚಾಗಿ ನೆಚ್ಚಿದ್ದು ಹೊರಗಿನಿಂದ ಬಂದ ನಟಿಯರನ್ನೇ. ಆದರೆ ಒಮ್ಮೆ ಅವರನ್ನು ನೆಚ್ಚಿದ ಮೇಲೆ ಅವರನ್ನು ಕನ್ನಡಿಗರಂತೆಯೇ ನೋಡಿದ್ದಾರೆ.

 

 

ಕನ್ನಡಿಗ ಪ್ರೇಕ್ಷಕ ಮಹಾಪ್ರಭುಗಳು ಅವರನ್ನು ಮೆಚ್ಚಿಕೊಳ್ಳಲು ಕಾರಣ ಇದೆ. ಈಕೆ ಬಾಲನಟಿಯಾಗಿ ಕನ್ನಡದಲ್ಲಿ ಒಂದು ಸಿನಿಮಾ ಹಾಗೂ ನಾಯಕಿಯಾಗಿ ಕೇವಲ 2 ಸಿನಿಮಾದಲ್ಲಿ ಮಾತ್ರವಷ್ಟೇ ಕಾಣಿಸಿಕೊಂಡಿದ್ದರು. ಆದರೆ ಇವರು ಮಾಡಿದ ಇಂಪ್ಯಾಕ್ಟ್ ಅನ್ನೂ ಕನ್ನಡಿಗರು ಎಂದಿಗೂ ಮರೆಯುವುದಿಲ್ಲ. ನಾವು ಇಲ್ಲಿ ಮಾತನಾಡುತ್ತಿರುವುದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಜೊತೆ ಯಾರೇ ನೀ ಚೆಲುವೆ ಚಿತ್ರದಲ್ಲಿ ನಟಿಸಿದ ನಟಿ ಸಂಗೀತ ಅವರ ಬಗ್ಗೆ.

 

 

ಇಂದು ಕೆಲವರಿಗೆ ನಟಿ ಸಂಗೀತ ಎಂದರೆ ಯಾರು ಎಂದು ಗುರುತಿಸಲು ಕಷ್ಟವಾಗಬಹುದು. ಸಂಗೀತ ಅವರು ಮೂಲತಃ ಕೇರಳದವರು. ಅವರು ಹುಟ್ಟಿದ್ದು 1978ರಲ್ಲಿ. ಇವರದ್ದು ಹುಟ್ಟಿನಿಂದಲೂ ಬಹಳ ಸೌಮ್ಯ ಸ್ವಭಾವ. ಸಿನಿಮಾಗಳಲ್ಲಿ ಕಾಣಿಸಿಕೊಂಡಂತೆಯೇ ಅವರು ನಿಜ ಜೀವನದಲ್ಲೂ ಸೌಮ್ಯವಾಗಿಯೇ ಇರುತ್ತಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕನಟನಾಗಿ ನಟಿಸಿದ್ದ ಸೂಪರ್ ಹಿಟ್ ಚಿತ್ರ ಶಾಂತಿ ಕ್ರಾಂತಿಯಲ್ಲಿ ಬಾಲನಟಿಯಾಗಿ ಕಾಣಿಸುವ ಮೂಲಕ ಕನ್ನಡ ಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

 

 

ಇದಾದ ನಂತರ ಎವರ್ ಗ್ರೀನ್ ಸೂಪರ್ ಹಿಟ್ ಚಿತ್ರವೆಂದು ಕನ್ನಡ ಚಿತ್ರರಂಗದಲ್ಲಿ ಕರೆಸಿಕೊಳ್ಳುವ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಯಾರೇ ನೀ ಚೆಲುವೆ ಚಿತ್ರದಿಂದ ಕನ್ನಡದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು. ಚಿತ್ರದ ಮ್ಯೂಸಿಕ್ ಹಾಗೂ ಸಂಗೀತ ಅವರ ಹಾವ ಭಾವಗಳು ಹಾಗೂ ಅವರ ಸಿಂಪಲ್ ಸೈಲೆಂಟ್ ಆಟಿಟ್ಯೂಡ್ ಕನ್ನಡ ಪ್ರೇಕ್ಷಕರಿಗೆ ಬಹಳಷ್ಟು ಇಷ್ಟವಾಯಿತು.

 

 

ಜನರು ರವಿಚಂದ್ರನ್ ರವರನ್ನು ನೋಡಲು ಎಷ್ಟು ಬಾರಿ ಚಿತ್ರಮಂದಿರಗಳಲ್ಲಿ ಚಿತ್ರ ನೋಡಲು ಬರುತ್ತಿದ್ದರೋ ಅಷ್ಟೇ ಬಾರಿ ಸಂಗೀತ ಅವರನ್ನು ಕೂಡ ನೋಡಲು ಟಿಕೆಟ್ ತೆಗೆದುಕೊಂಡು ದೊಡ್ಡ ಪರದೆಯ ಮೇಲೆ ನೋಡಲು ಮುಗಿ ಬೀಳುತ್ತಿದ್ದರು ಎಂದರೆ ನಂಬಲೇಬೇಕು. ಏಕೆಂದರೆ ಅಂದಿನ ಕಾಲದಲ್ಲಿ ಇಂದಿನ ಹಾಗೆ ಯಾವುದೇ ಯೂಟ್ಯೂಬ್‌ ಅಥವಾ ಒಟಿಟಿಗಳು ಇರಲಿಲ್ಲ.

 

 

ಆ ಕಾಲಕ್ಕೆ ಕೇವಲ ಒಂದು ಚಿತ್ರಕ್ಕೆ ತಮ್ಮ ಸಿಂಪಲ್ ನಟನೆಯಿಂದ ಕನ್ನಡಿಗರ ಕ್ರಶ್ ಆಗಿಬಿಟ್ಟಿದ್ದರು. ಅಂದಿನ ಕಾಲಕ್ಕೆ ಲವ್‌ ಮಾಡಿದರೆ ಇಂತಹ ಹುಡುಗಿಯನ್ನೇ ಪ್ರೀತಿಸಬೇಕು ಎನ್ನುವಷ್ಟರ ಮಟ್ಟಿಗೆ ಸಂಗೀತ ಅವರು ಯಾರೇ ನೀ ಚೆಲುವೆ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ಮೂಲಕವೇ ಅವರನ್ನು ಗುರುತು ಹಿಡಿಯುವಷ್ಟು ಅವರು ಬೆಳೆದಿದ್ದರು. ಅಷ್ಟೊಂದು ಪ್ರಸಿದ್ಧಿಯನ್ನು ಈ ಚಿತ್ರ ಅವರಿಗೆ ತಂದುಕೊಟ್ಟಿತ್ತು.

 

 

ಇದಾದ ಬಳಿಕ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಸೂಪರ್ ಹಿಟ್ ಚಿತ್ರ ಯಾರೇ ನೀ ಅಭಿಮಾನಿ ಎಂಬ ಚಿತ್ರದಲ್ಲಿ ಕೂಡ ಸಂಗೀತ ಅವರು ಕಾಣಿಸಿಕೊಂಡಿದ್ದರು. ಈ ಚಿತ್ರವೂ ಕೂಡ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ಶಿವಣ್ಣ ಅವರೊಂದಿಗೆ ರಮ್ಯಾ ಕೃಷ್ಣ ಹಾಗೂ ಸಂಗೀತ ಇಬ್ಬರು ನಾಯಕಿಯಾಗಿ ನಟಿಸಿದ್ದರು. ಸಂಗೀತ ಅವರ ಎಮೋಷನಲ್ ಪಾತ್ರ ಎಲ್ಲರನ್ನೂ ಮೆಚ್ಚಿಸಿತ್ತು. ಇದಾದ ನಂತರ ಅವರು ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೂ ಸಹ ಕನ್ನಡಿಗರ ಮನದಲ್ಲಿ ಸದಾ ಎವರ್ ಗ್ರೀನ್ ನಟಿಯಾಗಿ ಉಳಿದು ಕೊಂಡರು.

 

 

ನಂತರದ ದಿನಗಳಲ್ಲಿ ಸಂಗೀತ ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದರು. ಪ್ರೇಕ್ಷಕರನ್ನು ತನ್ನ ನಟನೆಯಿಂದಲೇ ಗೆಲ್ಲುವ ಪ್ರತಿಭೆ ಅವರಲ್ಲಿ ಮೈಗೂಡಿತ್ತು. ಸಂಗೀತ ಅವರ ನಟನೆ ಹಾಗೂ ಸೌಮ್ಯ ಸ್ವಭಾವದ ಸಿಂಪಲ್ ವ್ಯಕ್ತಿತ್ವ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಮಿಂಚಿದರು.

 

 

ಅಜಾತಶತ್ರುವಿನಂತೆ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದವರು ನಟಿ ಸಂಗೀತ. ಕೇರಳ ರಾಜ್ಯ ಸರ್ಕಾರದಿಂದ ಉತ್ತಮ ನಟಿ ಎಂಬ ಪ್ರಶಸ್ತಿಗೆ 1998ರಲ್ಲಿ ಭಾಜನರಾಗಿದ್ದರು. ಚಿತ್ರರಂಗದಲ್ಲೊ ಬಹು ಬೇಡಿಕೆ ಇದ್ದ ಸಂದರ್ಭದಲ್ಲೇ ಅವರು ಕ್ರಮೇಣ ದೂರವಾಗಿ ತಮ್ಮ ವೈಯಕ್ತಿಕ ಬದುಕಿನತ್ತ ಗಮನ ಹರಿಸಲು ಪ್ರಾರಂಭಿಸಿದರು.

 

 

2000ನೇ ಇಸವಿಯಲ್ಲಿ ನಟಿ ಸಂಗೀತಾ ತಮಿಳಿನ ಸಿನಿಮಾ ಛಾಯಾಗ್ರಹಕ ಹಾಗೂ ನಿರ್ದೇಶಕ ಶರವಣ ಎಂಬುವರನ್ನು ಮದುವೆಯಾದರು. ಮದುವೆಯಾದ ಎರಡು ವರ್ಷಗಳಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈಗ ಅವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆಗಾಗ ತನ್ನ ಗಂಡನ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಭಾಗಿಯಾಗುತ್ತಾರೆ.

Be the first to comment

Leave a Reply

Your email address will not be published.


*