ಮೇಕಪ್ ಗಾಗಿ ಈ ನಟಿ ಖರ್ಚು ಮಾಡುವುದೆಷ್ಟು ಗೊತ್ತೆ?

ಭಾರತೀಯ ಚಿತ್ರ ರಂಗದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟಿ ಪವಿತ್ರ ಲೋಕೇಶ ಹೆಸರು ಮಾಡಿದ್ದಾರೆ. ಅಲ್ಲದೇ ಹಲವು ವಿವಾದಗಳಿಂದ ಈ ನಟಿ ಗುರುತಿಸಿಕೊಂಡಿದ್ದಾರೆ.

ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು.

ತನ್ನ 16ನೇ ವಯಸ್ಸಿನಲ್ಲಿ ಚಲನಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದರು. ನಂತರ ೧೫೦ ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಳೆದ ವರ್ಷದಿಂದ ಈ ನಟಿ ಹಲವು ವಿವಾದಗಳಿಂದಲೇ ಹೆಸರುವಾಸಿಯಾಗಿದ್ದು, ತೆಲಗು ಚಿತ್ರರಂಗದ ನಟ ನರೇಶ ಅವರೊಂದಿಗೆ ವಿವಾಹವಾಗುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ. ಪವಿತ್ರಾ ಲೋಕೇಶ ಈ ಮೊದಲು ಎರಡು ಮದುವೆಯಾಗಿದ್ದಾರೆ. ಇದೀಗ ನರೇಶ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ. ಮೊದಲು ಸಾಫ್ಟವೇರ್ ಇಂಜಿನೀಯರ್ ಅವರನ್ನು ಮದುವೆಯಾಗಿದ್ದ ಇವರು ನಂತರ ನಟ ಸುಚೇಂದ್ರ ಪ್ರಸಾದ ಅವರನ್ನು ಮದುವೆಯಾಗಿದ್ದರು.

ಆದರೆ ಇದೀಗ ನಟಿ ಪವಿತ್ರಾ ಲೋಕೇಶ ತಮ್ಮ ಮೇಕಪ್ ಗಾಗಿ ಕೋಟಿಗಟ್ಟಲೇ ಹಣ ವ್ಯಯಿಸುತ್ತಿದ್ದರು. ಹಣಕ್ಕಾಗಿಯೇ ಆಕೆ ನಟ ನರೇಶ ಅವರನ್ನು ವಿವಾಹವಾಗಿದ್ದಾರೆ ಎಂದು ಮಾಜಿ ಪತಿ ಸುಚೇಂದ್ರ ಪ್ರಸಾದ ತಿಳಿಸಿದ್ದಾರೆ. ಪವಿತ್ರಾ ಲೋಕೇಶ ಮೊದಲಿನಿಂದಲೂ ಆಡಂಬರದ ಜೀವನ ನಡೆಸಲು ಇಚ್ಚಿಸುತ್ತಿದ್ದಳು. ಹೀಗಾಗಿ ಆಕೆ ನಟ ನರೇಶನನ್ನು ಮದುವೆಯಾಗಿದ್ದಾಳೆ ಎಂದು ಸುಚೇಂದ್ರ ಪ್ರಸಾದ ಹೇಳಿದ್ದಾರೆ.

ಇದನ್ನು ಕೇಳಿರುವ ಕೆಲವರು ಈ ವಯಸ್ಸಿನಲ್ಲೂ ನಟಿ ಪವಿತ್ರಾಗೆ ಸೌಂದರ್ಯದ ಬಗ್ಗೆ ಯಾಕಿಷ್ಟು ವ್ಯಾಮೋಹ ಎಂದು ಪ್ರಶ್ನೆಗಳನ್ನು ಮಾಡಿದ್ದಾರೆ.

Leave a Reply

Your email address will not be published. Required fields are marked *